Friday, May 24, 2013

ಅಂತು ಇಂತು ಏನೋ ಬರೆಯೋಣ ಅಂತ ಕೂತಿದ್ದೇನೆ, ಬಹಳ ದಿನದ ಕನಸು.... ಏನಾದರು ಬರೀಬೇಕು ಅಂತ... ನೋಡೋಣ ನಿಮಗೆ ಏನು ಅನ್ನಿಸುತ್ತೋ ಅಂತ..


ಒಂದಿನ ಬೆಳಿಗ್ಗೆ Cabನಲ್ಲಿ ಆಫಿಸ್ಸಿಗೆ ಹೋಗ್ತ್ಹಿರ್ಬೇಕಾದ್ರೆ ಒಂದು ದೃಶ್ಯನೋಡಿದೆ. ಒಂದುVIP ಕಾರು ಕೆಂಪು ದೀಪ ಹಾಕಿಕೊಂಡು ತನ್ನ ಮಾಮೂಲಿ ಶಬ್ದ ಮಾಡ್ತ ನಮ್ಮನ್ನೆಲ್ಲಾ ದಾಟಿ ಮುಂದೆ ಹೋಯಿತು.. ಆ ಕಾರಿಗೆ ಹಿಂದೊಂದು ಮುಂದೊಂದು ಪೊಲೀಸ್ ಜೀಪುಗಳ ಸಾಥ್ ಬೇರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ನಮಗೆಲ್ಲಾ ಹೊಟ್ಟೆ ಕಿಚ್ಚು ತರಿಸಿ ನೋಡ್ ನೋಡ್ತಾನೆ ಮಾಯವಾಗಿತ್ತು. ಸರಿ, ನಾವು ನಮ್ಮಸ್ಟ್ಕಕ್ಕೆ ನಾವು ಪುನಃ ಪೇಪರ್ ಓದುತ್ತಾ ಮುಂದೆ ಸಾಗಿದ್ವಿ.ಇನ್ನೂ ಸ್ವಲ್ಪ ದೂರ ಬಂದಿಲ್ಲಾ, ಆಗಲೇ ಮತ್ತದೇ ಶಬ್ದ!!, ಆದರೆ ಈಗ ಒಂದು 108 ಅಂಬುಲೆನ್ಸ್ ಬರ್ತಿತ್ತು. ಪಾಪ.. ಆದರೆ ಅದಕ್ಕೆ ಆ VIP ಕಾರಿನ ಅದೃಷ್ಟ ಇರ್ಲಿಲ್ಲಾ. ಬೆಂಗಳೂರಿನ ಬೆಳಗಿನ Traffic ತೊಂದರೆಗೆ ಸಿಕ್ಕು ಒದ್ದಾಡ್ತಾ ಇದ್ದ ಹಾಗೆ ಅನ್ನಿಸ್ತಿತ್ತು. ನಾವು ಅದರ ಮತ್ತು ಅದರೊಳಗೆ ಇದ್ದವರ ಬಗ್ಗೆ ಅನುಕಂಪ ತೋರಿಸ್ತಾ, ಸಿಗ್ನಲ್ ದಾಟಿ ಮುಂದೆ  ಸಾಗಿ ಆಫೀಸ್ ತಲುಪಿದೆವು.

ಆದರೆ ಆ ದೃಶ್ಯ ನನ್ನಲ್ಲಿ ಸ್ವಲ್ಪ ಗಲಿಬಿಲಿ ತಂದಿತ್ತು... ಕಾಪಿ ಹೀರುತ್ತಾ ಕೂತಿದ್ದಾಗ ಒಂದು ವಿಷಯ ತಲೇಲಿ ಕೊರೆಯಲು ಶುರುವಾಯಿತು. ನಮ್ಮ ಪೊಲೀಸರು ಎಷ್ಟು ಚೆನ್ನಾಗಿ ಆ VIP ಕಾರಿಗೆ Security ಕೊಟ್ಟಿದ್ದರು!. ಆ ಕಾರೋಳಗಿದ್ದ ಮಹನೀಯರ ಸಮಯ ಹೇಗೆ ಉಳಿಸಿದ್ದರು!! ನಿಜಕ್ಕೂ GREAT!!! ಆದರೆ ಆ 108ಗೆ ಈ ಭಾಗ್ಯ ಇರ್ಲಿಲ್ಲಾ. ಈ ಇಬ್ಬರಲ್ಲಿ ನಿಜವಾಗಿ ಯಾರಿಗೆ ಸಮಯದ ಅಭಾವ ಇದ್ದೀತು? ಸಮಯದ ಪ್ರಾಮುಖ್ಯತೆ ಎಲ್ಲಿ ಜಾಸ್ತಿ ಇತ್ತು? ಕೆಂಪು ದೀಪದ ಕಾರಿಗೆ ದೊರೆತ ಪೋಲೀಸರ ಸಹಾಯ ಇದೇ 108ಗೂ ದೊರೆತಿದ್ದರೆ ಒಬ್ಬರ ಪ್ರಾಣ ಉಳೀತಿತ್ತಲ್ಲಾ ಅಂತ ಯೋಚಿಸ್ತಾ ಕುಳಿತೆ. ನಮ್ಮ ಪೊಲೀಸರು ಇಂತ ಸಹಾಯಕ್ಕೆ ಶಕ್ತರಲ್ಲವೇ? ಮೇಲಿನ ಅಧಿಕಾರಿಗಳು ಸ್ವಲ್ಪ ಮನಸ್ಸು ಮಾಡಿದರೆ ಸಾಧ್ಯವಿಲ್ವಾ?... ಈ ಪ್ರಯತ್ನ ಯಾಕೆ ಮಾಡಬಾರದು?...

ಈ ವಿಚಾರ ನನ್ನಲ್ಲಿ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ... ಹೇಳಿ, ಇದು ಸಾಧ್ಯವೇ ಇಲ್ವಾ? ಅಥವಾ ಅದನ್ನು ಸಾಧಿಸುವುದಾದರು ಹೇಗೆ?.. ನಿಮ್ಮ ಅನಿಸಿಕೆ ತಿಳಿಸಿ... ಸಾಧ್ಯವಾದರೆ ಮೇಲಿನವರಿಗೂ ಸ್ವಲ್ಪ ತಿಳಿಸುವ ಪ್ರಯತ್ನ ಮಾಡೋಣ... ಏನಂತಿರಾ?!!!...


24/05/2013